ಅಭಿಪ್ರಾಯ / ಸಲಹೆಗಳು

ದೃಷ್ಟಿ | ಮೂಲೋದ್ದೇಶಗಳು | ಕಾರ್ಯಾಚರಣೆ

ಆಶಯ

ಯೋಜನೆಯ ಧ್ಯೇಯವೆಂದರೆ “ಸಂಪರ್ಕದಲ್ಲಿ ಸರಕಾರ”. ಇದರಿಂದಾಗಿ ನಾಗರೀಕರೊಂದಿಗಿನ ಸರ್ಕಾರದ ಪ್ರತಿಕ್ರಿಯೆಯಲ್ಲಿ ಪರಿವರ್ತನೆ.

ಈ ಯೋಜನೆಯ ಒಟ್ಟಾರೆಯ ಉದ್ದೇಶಗಳೆಂದರೆ:-

  • ಎಲ್ಲಾ ಸರ್ಕಾರದ ಇಲಾಖೆಗಳು/ ಸಾರ್ವಜನಿಕ ವಲಯದ ಘಟಕಗಳಿಗೆ “ಪ್ಲಗ್ ಅಂಡ್ ಕನೆಕ್ಟ್” ವಾತಾವರಣ ಸೃಷ್ಟಿಸಿ ಬೇಡಿಕೆಗೆ ಅನುಗುಣವಾಗಿ ಬ್ಯಾಂಡ್ ವಿಡ್ತ್ ಒದಗಿಸುವುದು.
  • ಬಹಳ ವಿಶ್ವಾಸಾರ್ಹ, ಸದೃಢ ಹಾಗೂ ಸುರಕ್ಷಿತ ಸಂವಹನ ಪ್ರಕ್ರಿಯೆ.
  • ಜಾಲಕ್ಕಾಗಿ ವಿಶ್ವಾಸಾರ್ಹ ಹಾಗೂ ಸುರಕ್ಷಿತ ಆಧಾರ
  • ದತ್ತಾಂಶ ಸಂರಕ್ಷಣೆಗೆ ಡಿ.ಆರ್. ಸೈಟ್ ನಿರ್ಮಾಣ
  • ಸರ್ಕಾರದ ಇ-ಆಡಳಿತ ಅನ್ವಯಿಕೆಗಳನ್ನು ಕೇಂದ್ರೀಕೃತ ಗೊಳಿಸುವುದರಿಂದ ಒಟ್ಟಾರೆ ನಿರ್ವಹಣಾ ವೆಚ್ಚದಲ್ಲಿ ಇಳಿತ.
  • ಸರ್ಕಾರಕ್ಕೆ ಇಂಟ್ರಾನೆಟ್ ಸೌಲಭ್ಯ ಒದಗಿಸಿ ಪ್ರಭಾವಕಾರಿ ಸಂವಹನಕ್ಕೆ ಕಾಗದರಹಿತ ವಾತಾವರಣಕ್ಕೆ ಅನುಕೂಲಿಸುವುದು.
  • ನಾಗರೀಕರಿಂದ ಸರ್ಕಾರಕ್ಕೆ, ಔದ್ಯಮಿಕ ಸಂಸ್ಥೆಗಳಿಂದ ಸರ್ಕಾರಕ್ಕೆ ಆಗುವ ಸರ್ಕಾರದ ಸೇವೆಗಳ ವಿದ್ಯುನ್ಮಾನ ವಿತರಣೆಯ ಅನುಕೂಲ.
  • ರಾಜ್ಯದ ಎಲ್ಲಾ ಇ-ಆಡಳಿತ ಅನ್ವಯಿಕೆಗಳಿಗೆ ಸಂಪರ್ಕ
  • ಸಾಮಾನ್ಯ ಹಾಗೂ ಯಾವುದೇ ರೀತಿಯ ವಿಪತ್ತುಗಳ ಸಂದರ್ಭಗಳಲ್ಲಿ ದರಮೌಲ್ಯವುಳ್ಳ ಹಾಗೂ ಪರ್ಯಾಯ ಮಾರ್ಗದ ಸಂವಹನದ ಪೂರೈಕೆ.
  • ಸರ್ಕಾರಿ ಕಾರ್ಯಪ್ರವೃತ್ತರೊಡನೆ ಸರ್ಕಾರದ ಸಂವಾದಕ್ಕಾಗಿ ಸಾಮಾನ್ಯ ಮತ್ತು ಯಾವುದೇ ರೀತಿಯ ವಿಪತ್ತಿನ ಸಂದರ್ಭಗಳಲ್ಲಿಯೂ ವಿಡಿಯೋ ಕಾನ್ಫರೆನ್ಸ್ ಅನುಕೂಲದ ಸೃಜನೆ

ಕರ್ನಾಟಕದ ಯಾವುದೇ ಸ್ಥಳದಿಂದ ನಾಗರೀಕರು ಸರ್ಕಾರದ ಸೇವೆಗಳನ್ನು ಪಡೆಯಲು ಸಂಪರ್ಕಯುಕ್ತ ಪರಿಸರವೊಂದನ್ನು ಹೊಂದುವ ಮೂಲಕ ಈ ಯೋಜನೆಯು ಡಿಜಿಟಲ್ ವಾತಾವರಣಕ್ಕೆ ಸಂಪರ್ಕ ಸೇತುವೆ ಆಗಲಿದೆ.  ಈ ಯೋಜನೆಯಿಂದ ಆಂತರಿಕ-ಸರ್ಕಾರಿವಹಿವಾಟುಗಳಲ್ಲಿ ಸಂವಹನದ ವೇಗ ಮತ್ತು ದಕ್ಷತೆಯು ಹೆಚ್ಚುವ ನಿರೀಕ್ಷೆ ಇದೆ.

ದೃಷ್ಠಿಕೋನ

ಏಕೀಕೃತ ಪರಿಣಾಮಕಾರಿ, ಸುರಕ್ಷಿತ ಮತ್ತು ವಿಶ್ವಾಸಾರ್ಹ ರಾಜ್ಯ ವೈಡ್‌ ಏರಿಯಾ ನೆಟ್‌ವರ್ಕ್ ಮತ್ತು ಲೋಕಲ್ ಏರಿಯಾ ನೆಟ್‌ವರ್ಕ್ ಸ್ಥಾಪಿಸಿ ರಾಜ್ಯ ಮಾಹಿತಿ ಹೆದ್ದಾರಿಯನ್ನು ರಚಿಸುವುದು, ಇದರಿಂದಾಗಿ ಸರ್ಕಾರದ ಕಾರ್ಯ ಚಟುವಟಿಕೆಗಳಲ್ಲಿ ಮತ್ತಷ್ಟು ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ತರಬಹುದಾಗಿದೆ . ಭೌಗೋಳಿಕ ಸ್ಥಾನಮಾನದ ಬೇಧವಿಲ್ಲದೆ ಯಾವುದೇ ಪ್ರದೇಶದಿಂದ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಬಹುದಾದ ಸೌಲಭ್ಯವನ್ನು ರಾಜ್ಯಾದ್ಯಾಂತ ನಾಗರೀಕರು ಪಡೆದುಕೊಳ್ಳಬಹುದು.

  • ಸರ್ಕಾರಕ್ಕೆ ಏಕೀಕೃತ, ಪರಿಣಾಮಕಾರಿ, ಸುರಕ್ಷಿತ ಅಂತರ್ಜಾಲ ಸೌಲಭ್ಯ ಒದಗಿಸುವ ಮೂಲಕ ಪರಿಣಾಮಕಾರಿ ಸಂವಹನಕ್ಕೆ ಅನುಕೂಲ ಕಲ್ಪಿಸುವುದು ಮತ್ತು ಕಾಗದ ರಹಿತ ವಾತಾವರಣ ಸೃಷ್ಟಿಸುವುದು.
  • ಸರ್ಕಾರದಿಂದ ನಾಗರಿಕರಿಗಾಗಿ (ಜಿ 2 ಸಿ), ಸರ್ಕಾರದಿಂದ ಉದ್ದಿಮೆಗಳಿಗೆ (ಜಿ 2 ಬಿ), ಸರ್ಕಾರದಿಂದ ಸರ್ಕಾರಕ್ಕೆ (ಜಿ 2 ಜಿ) ಮತ್ತು ಸರ್ಕಾರದಿಂದ ಸರ್ಕಾರಿ ನೌಕರರಿಗೆ (ಜಿ 2 ಇ) ಸೇವೆಗಳಿಗೆ ವಿದ್ಯುನ್ಮಾನ ಸೌಲಭ್ಯ ಒದಗಿಸುವುದು.
  • ರಾಜ್ಯದ ಎಲ್ಲಾ ಇ-ಆಡಳಿತ ಅನ್ವಯಿಕೆ(ಅಪ್ಲಿಕೇಷನ್‌)ಗಳಿಗೆ ಸಂಪರ್ಕ ಒದಗಿಸುವುದು.
  • ಸಾಮಾನ್ಯ ಹಾಗೂ ವಿಪತ್ತಿನ ಸಮಯದಲ್ಲೂ ವಿಶ್ವಾಸಾರ್ಹ, ಅಗ್ಗದ ಮತ್ತು ಪರ್ಯಾಯ ಸಂವಹನ ವ್ಯವಸ್ಥೆ ಒದಗಿಸುವುದು.
  • ಸಾಮಾನ್ಯ ಮತ್ತು ಯಾವುದೇ ರೀತಿಯ ವಿಪತ್ತಿನ ಸಮಯದಲ್ಲಿ ಸರ್ಕಾರ ಮತ್ತು ಸರ್ಕಾರದ ಕಾರ್ಯಕರ್ತರೊಂದಿಗೆ ಸಂವಹನಕ್ಕೆ ವೀಡಿಯೊ ಸಂವಾದಂಥ ಪರಿಹಾರಗಳನ್ನು ನೀಡುವುದು.

 

ವಿವರಣೆ

ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್‌ವರ್ಕ್ ಡಿಸೆಂಬರ್ 2009 ರಿಂದ ಕಾರ್ಯನಿರ್ವಹಿಸುತ್ತಿದೆ. ಇದು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಿಗೆ ಧ್ವನಿ, ವಿಡಿಯೋ ಮತ್ತು ಡೇಟಾ ಸೇವೆಗಳನ್ನು ಒದಗಿಸುವ ರಾಜ್ಯ ಮಾಹಿತಿಯ ಉನ್ನತ ಮಾರ್ಗವಾಗಿ ಕಾರ್ಯನಿರ್ವಹಿಸುತ್ತಿದೆ.

ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್‌ವರ್ಕ್ 2.0 (ಕೆಎಸ್‌ಡಬ್ಲ್ಯುಎನ್ 2.0) ನೆಟ್‌ವರ್ಕ್ ಒಳಗೆ ಎಂಪಿಎಲ್ಎಸ್ ತಂತ್ರಜ್ಞಾನವನ್ನು ಬಳಸಿಕೊಂಡು WAN ಸೇವೆಗಳನ್ನು ಒದಗಿಸುವ ಮೂಲಕ ಮತ್ತು ಸರ್ಕಾರಿ ಕಚೇರಿಗಳಿಗೆ ಬ್ಯಾಂಡ್‌ವಿಡ್ತ್ ಸೇವಾ ಪೂರೈಕೆದಾರ ಮತ್ತು ಲ್ಯಾನ್ ಸೇವೆಗಳನ್ನು ಒದಗಿಸುವ ಮೂಲಕ ಸರ್ಕಾರಿ ಕಚೇರಿಗಳಿಗೆ ಹೆಚ್ಚು ವಿಶ್ವಾಸಾರ್ಹ ಮತ್ತು ಸುರಕ್ಷಿತ ನೆಟ್‌ವರ್ಕ್ ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ.

ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿಗಳನ್ನು ಅಡ್ಡ ಮಟ್ಟದಲ್ಲಿ ಆಯಾ ಕೆಎಸ್‌ವಾನ್ ಪಿಒಪಿಗಳಿಗೆ ಸಂಪರ್ಕಿಸಲಾಗಿದೆ. ಕೆಎಸ್‌ಡಬ್ಲ್ಯುಎನ್ ನೆಟ್‌ವರ್ಕ್ ಹೆಚ್ಚಿನ ಸಂಖ್ಯೆಯಲ್ಲಿ ತಾಲ್ಲೂಕು ಮಟ್ಟಕ್ಕಿಂತ ಕೆಳಗಿರುವ ವಿವಿಧ ಕಚೇರಿಗಳಿಗೆ ವಿಸ್ತರಿಸಿದೆ. ಪ್ರಸ್ತುತ ಮುಖ್ಯಮಂತ್ರಿಗಳ ಕಚೇರಿ, ರಾಜ್ಯಪಾಲರ ಕಚೇರಿ, ಹೈಕೋರ್ಟ್, ಪೊಲೀಸ್, ನ್ಯಾಯಾಂಗ ನ್ಯಾಯಾಲಯಗಳು ಮತ್ತು ಕಾರಾಗೃಹಗಳು, ಖಜಾನೆಗಳು, ಅಂಚೆಚೀಟಿ ಮತ್ತು ನೋಂದಣಿ, ಭೂಮಿ, ಸಾರಿಗೆ, ಕೃಷಿ, ಶಿಕ್ಷಣ, ಆರೋಗ್ಯ, ಆಹಾರ ಮತ್ತು ನಾಗರಿಕ ಸೇರಿದಂತೆ ಸುಮಾರು 75 ಇಲಾಖೆಗಳು ಮತ್ತು ಮಂಡಳಿಗಳು ಮತ್ತು ನಿಗಮಗಳ 4000 ಕ್ಕೂ ಹೆಚ್ಚು ಕಚೇರಿಗಳು ಕರ್ನಾಟಕ ರಾಜ್ಯದಾದ್ಯಂತ ಹರಡಿರುವ ಸರಬರಾಜು, ಪುರಸಭೆ ಆಡಳಿತ ಇತ್ಯಾದಿಗಳನ್ನು ಸರ್ಕಾರದ ನಾಗರಿಕ ಆಧಾರಿತ ಸೇವೆಗಳನ್ನು ವಿಸ್ತರಿಸಲು ಕೆಎಸ್‌ಡಬ್ಲ್ಯುಎನ್‌ನ ಅಡಿಯಲ್ಲಿ ತರಲಾಗಿದೆ.

ಸಾಧನೆಗಳು

ನಿತ್ಯದ ಸೇವೆಗೆ ಯಾವುದೇ ಅಡೆತಡೆಯಿಲ್ಲದೆ 2019 ರ ಜನವರಿ ಮತ್ತು ಫೆಬ್ರವರಿ ಅವಧಿಯಲ್ಲಿ ಕೆಸ್ವಾನ್‌ 1.0ನೇ ಆವೃತ್ತಿಯಿಂದ ಕೆಸ್ವಾನ್‌ 2.0 ಆವೃತ್ತಿಗೆ ಸುಗಮ ವಲಸೆ.

ವಿಡಿಯೋ ಸಂವಾದ ಸೇವೆಯನ್ನು ತಹಶೀಲ್ದಾರ್‌ ಕಚೇರಿಗಳಿಗೂ ವಿಸ್ತರಣೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ದ್ವಿತೀಯ ಸ್ಟುಡಿಯೋಗಳನ್ನು ಸೃಷ್ಟಿಸಲಾಗಿದೆ.

ಬಿಎಂಟಿಸಿ, ಖಜಾನೆ, ನೋಂದಣಿ ಮತ್ತು ಮದ್ರಾಂಕ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿಗೆಳಿಗೆ ದ್ವಿತೀಯಕ ಸಂಪರ್ಕಗಳನ್ನು ಯಶಸ್ವಿಯಾಗಿ ಒದಗಿಸಲಾಗಿದೆ.

ಹೊಸದಾಗಿ ರಚಿಸಲಾದ ತಾಲೂಕುಗಳಿಗೆ ಕೆಸ್ವಾನ್‌ ವಿಸ್ತರಿಸಲಾಗಿದೆ.

1000 ಗ್ರಾಮ ಪಂಚಾಯಿತಿಗಳಿಗೆ ತಂತ್ರಾಂಶ ಆಧಾರಿತ ವಿಡಿಯೋ ಸಂವಾದ ಜಾರಿಗೆ ತರಲಾಗಿದೆ.

ಅಂಕಿಅಂಶಗಳು
 

ಕ್ರ.ಸಂ.

ಇಲಾಖೆ

ಕಚೇರಿಗಳಸಂಖ್ಯೆ

1

ನೋಂದಣಿಮಹಾಪರಿವೀಕ್ಷಕರುಮತ್ತುಮುದ್ರಾಂಕಗಳಆಯುಕ್ತರು

284

2

ಖಜಾನೆ ಇಲಾಖೆ

218

3

ಭೂಮಿ

211

4

ಸಾರಿಗೆ ಇಲಾಖೆ

68

5

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

153

6

ನ್ಯಾಯಾಂಗ ಇಲಾಖೆ

205

7

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ

214

8

ಬಿಎಂಟಿಸಿ

58

9

ಬಂಧಿಖಾನೆ ಇಲಾಖೆ

43

10

ನಾಡಕಚೇರಿಗಳು

305

11

ತಾಲೂಕು ಪಂಚಾಯತ್

82

12

ಕೃಷಿ ಕ್ಷೇತ್ರ

110

13

ತಾಲೂಕು ಆಸ್ಪತ್ರೆಗಳು

82

14

ಅರಣ್ಯ ಇಲಾಖೆ

60

15

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು

41

16

ಜಿಲ್ಲಾ ತರಬೇತಿ ಸಂಸ್ಥೆಗಳು

21

 

ಒಟ್ಟು

2155

ಇತ್ತೀಚಿನ ನವೀಕರಣ​ : 24-08-2020 04:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080